Print

ಸೇಕ್ರೆಡ್ ಹಾರ್ಟ್ ಧರ್ಮಕೇಂದ್ರ ನೂರ ಇಪ್ಪತ್ತೈದು ವರುಷಗಳನ್ನು ಸಾಗಿ ಬಂದ ದಾರಿ............

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಪಶ್ಚಿಮ ಘಟ್ಟಗಳ ಅಭೇದ್ಯ ಶಿಖರ ಶ್ರೇಣಿಗಳ ನಡುವೆ, ಭೌಗೋಳಿಕವಾಗಿ ಸುಂದರ ಪ್ರಾಕೃತಿಕ, ಹಚ್ಚ ಹಸುರಿನ ಸಿರಿಯಲ್ಲಿ, ಅಚ್ಚರಿಯ ಸೊಬಗನ್ನು ತನ್ನೊಡಲಲ್ಲಿ ಹೊದೆದು ಮೈದುಂಬಿಸಿಕೊಂಡು, ತನ್ನಿರುವಿಕೆಯನ್ನು ಪ್ರಾಪಂಚಿಕ ಭೂಪಟದಲ್ಲಿ ಗುರುತಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕೇಂದ್ರ ಮಡಂತ್ಯಾರು. ಸರ್ವ ಧರ್ಮೀಯರೊಂದಿಗೆ ಸಹಬಾಳ್ವೆ, ಅನೋನ್ಯತೆ, ಶಾಂತಿ-ಸಾಮರಸ್ಯಕ್ಕೆ ಹೆಸರುವಾಸಿಯಾದ ಈ ಪ್ರದೇಶ, ಮಂಗಳೂರು-ಬೆಳ್ತಂಗಡಿ ಹೆದ್ದಾರಿಯಲ್ಲಿ, ಮಂಗಳೂರಿನಿಂದ 44 ಕಿ.ಮೀ. ದೂರದಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ.


ಸೇಕ್ರೆಡ್ ಹಾರ್ಟ್ ಧರ್ಮಕೇಂದ್ರ ಸ್ಥಾಪನೆಯಾಗಿ ಇಲ್ಲಿರುವ ವಿದ್ಯಾ ದೇಗುಲಗಳಿಂದ ಉತ್ಕøಷ್ಟ ಗುಣಮಟ್ಟದ ಜ್ಞಾನಾಮೃತವನ್ನು ನೀಡುವುದರ ಮೂಲಕ ಮಡಂತ್ಯಾರು ಚರಿತ್ರೆಯ ಪುಟಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವವ್ಯಾಪಿ ಪ್ರಸಿದ್ಧಿಯನ್ನು ಪಡೆದಿದೆ.


ಪ್ರಸ್ತುತ ವರ್ಷ ಈ ಧರ್ಮಕೇಂದ್ರ್ರದ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದ ಐತಿಹಾಸಿಕ ಕ್ಷಣಗಳನ್ನು ಅವಿಸ್ಮರಣೀಯವಾಗಿಸುವಲ್ಲಿ ನಾವೆಲ್ಲರೂ ಕೃತಾರ್ಥರಾಗಿರುವುದು ನಮ್ಮೆಲ್ಲರ ಸೌಭಾಗ್ಯ.

ಮಡಂತ್ಯಾರು ಕಥೋಲಿಕ ಧರ್ಮಕೇಂದ್ರ ಸ್ಥಾಪನೆ:
ಮಡಂತ್ಯಾರು ಕಥೊಲಿಕ್ ಧರ್ಮಕೇಂದ್ರ ಹಿಂದೆ ಬಂಟ್ವಾಳ ಅಗ್ರಹಾರ (ಅಗ್ರಾರ್) ಧರ್ಮಕೇಂದ್ರಕ್ಕೆ ಸೇರಿದ ಪ್ರದೇಶ. 1701 ರಲ್ಲಿ ಸ್ಥಾಪನೆಯಾದ ಅಗ್ರಹಾರ ಚರ್ಚ್ ಮಂಗಳೂರು ಧರ್ಮಕೇಂದ್ರದ ಪುರಾತನ ಚರ್ಚ್. ಕಾಲಕ್ರಮೇಣ ಈ ಚರ್ಚ್ ಪುನರ್‍ವಿಂಗಡಣೆಯಾಗಿ ಬಹಳಷ್ಟು ಹೊಸ ಚರ್ಚ್‍ಗಳ ಸ್ಥಾಪನೆಗೆ ಕಾರಣಕರ್ತವಾಯಿತು. ಮಡಂತ್ಯಾರು ಕಥೋಲಿಕ್ ನಿವಾಸಿಗಳ ಆಧ್ಯಾತ್ಮಿಕ ಅಗತ್ಯಗಳಿಗೆ ಸ್ಪಂದಿಸಲು ಸುಮಾರು 15ರಿಂದ 20 ಕಿ.ಮೀ.ಗಳ ಕಾಲ್ನಡಿಗೆಯ ಪಯಣ ಬಹಳ ಕಷ್ಟಸಾಧ್ಯವಾಗಿತ್ತು. ಅಗ್ರಹಾರದ ಧರ್ಮಗುರುಗಳು ವರ್ಷಕ್ಕೊಮ್ಮೆ ಇಲ್ಲಿ ಭೇಟಿ ನೀಡಿ ಬಂಗೇರಕಟ್ಟೆಯಲ್ಲಿರುವ ಕ್ರೈಸ್ತರ ಸಮಾಧಿಯನ್ನು ಆಶೀರ್ವದಿಸಿ ಕಥೋಲಿಕ್ ಕುಟುಂಬಗಳಿಗೆ ಭೇಟಿ ನೀಡುತ್ತಿದ್ದರು.


ಕ್ರೈಸ್ತ ಸಮುದಾಯದ ಆಸೆಯಂತೆ ಈ ಪ್ರದೇಶದಲ್ಲಿಯೇ ಕ್ರೈಸ್ತ ದೇವಾಲಯದ ಸ್ಥಾಪನೆಗೆ ಗೋವಾದ ಬಿಷಪರಿಗೆ 1886 ರಲ್ಲಿ ಮನವಿಯನ್ನು ಸಲ್ಲಿಸಲಾಗಿ, ಮನವಿಗೆ ಸ್ಪಂದಿಸಿದ ಬಿಷಪರು ಮಡಂತ್ಯಾರಿನಲ್ಲಿ ಸಮಾಧಿ ಭೂಮಿಯನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತಾರೆ. ಇಗರ್ಜಿಯನ್ನು ಸ್ಥಾಪಿಸಲು ಫಾ| ಎಮಿಲಿಯನ್ ಅಲೆಗ್ಸಾಂಡರ್ ಡಿಸೋಜರವರು ಒಂದು ಪ್ರಶಸ್ತ ಸ್ಥಳವನ್ನು ಆರಿಸಿದರು. ಈತನ್ಮಧ್ಯೆ ಅಗ್ರಹಾರ ಧರ್ಮಕೇಂದ್ರÀ ಗೋವಾ ಧರ್ಮ ಪ್ರಾಂತದಿಂದ ಬೇರ್ಪಟ್ಟು ಮಂಗಳೂರು ಧರ್ಮಪ್ರಾಂತ್ಯಕ್ಕೆ ಸೇರಿಸಲಾಗಿ ಗೋವಾ ಬಿಷಪರಿಗೆ ಸಲ್ಲಿಸಿದ ಮನವಿ ಮಗದೊಮ್ಮೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ನಿಕೊಲಸ್ ಪಗಾನಿಯವರಿಗೆ ಸಲ್ಲಿಸಬೇಕಾಯಿತು. ಈ ಮನವಿಯನ್ನು ಅಂಗೀಕರಿಸಿದ ಬಿಷಪ್ ಪಗಾನಿಯವರು 1887ನೇ ಜನವರಿ 1ನೇ ತಾರೀಕಿನಂದು ಮಡಂತ್ಯಾರು ಪ್ರದೇಶವನ್ನು ಅಗ್ರಹಾರ ಧರ್ಮಕೇಂದ್ರÀದಿಂದ ಬೇರ್ಪಡಿಸಿ ತಾತ್ಕಾಲಿಕವಾಗಿ ಗಡಾಯಿ (ಬೆಳ್ತಂಗಡಿ) ಧರ್ಮಕೇಂದ್ರÀದ ಧರ್ಮಗುರುಗಳಾದ ಫಾ| ಪಾಸ್ಕಲ್ ಮಸ್ಕರೇನಸ್‍ರವರ ವಶಕ್ಕೊಪ್ಪಿಸಿದರು. 1888ರಲ್ಲಿ ಗುಡಿಸಲಿನಲ್ಲಿ ಪೂಜಾವಿಧಿಗಳು ಈ ಪ್ರದೇಶದ ಜನರಿಗೆ ತೃಪ್ತಿಕರವಾಗಿಲ್ಲದ ಕಾರಣ ಸ್ವತಂತ್ರ ಧರ್ಮಕೇಂದ್ರÀದ ಸ್ಥಾಪನೆಯನ್ನು ಕಥೋಲಿಕರು ಬಯಸಿದರು.


ಈ ಕಾರ್ಯಕ್ಕೋಸ್ಕರ ಕೊಳ್ಕೆಬೈಲಿನ ಫ್ರಾನ್ಸಿಸ್ ಡಿಸೋಜ (ಪೆÇರ್ಸೊ ಪೆÇರ್ಬು) ಅವರು ಸ್ವಂತ ಜಮೀನನ್ನು ಉಂಬಳಿಯಾಗಿ ನೀಡಿ ಮಂಗಳೂರಿನ ಬಿಷಪ್ ಪಗಾನಿಯವರ ಅನುಮತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ಮಡಂತ್ಯಾರು ಸ್ವತಂತ್ರ ಧರ್ಮಕೇಂದ್ರÀವಾಗಿ 1889 ರಲ್ಲಿ ತನ್ನ ಅಸ್ಮಿತತೆಯನ್ನು ಖಚಿತಪಡಿಸಿತು. ಪೂಜ್ಯ ರೊಜಾರಿಯೋ ಡಿ’ಸೋಜರವರು ಪ್ರಥಮ ಧರ್ಮಗುರುಗಳಾಗಿ ನೇಮಕಗೊಂಡರು.


ಈತನ್ಮಧ್ಯೆ ವಾಹನಗಳ ಲಭ್ಯತೆ ಇಲ್ಲದಾಗ್ಯೂ ಮಡಂತ್ಯಾರಿನಲ್ಲಿ ಸ್ವಿಸ್ ಮಿಶನರಿ ಫಾ| ಪಾವುಸ್ತಿನ್ ಕೋರ್ಟಿಯವರ ಸೇವೆ ಶ್ಲಾಘನೀಯ. ಅರ್ತಿಲದಲ್ಲಿರುವ ಪ್ರಸ್ತುತ ಶ್ರೀ ಡೇನಿಸ್ ಗೊನ್ಸಾಲ್ವಿಸ್ ವಾಸ್ತವ್ಯವಿರುವ ಮನೆಯಲ್ಲಿ ಆ ಪ್ರದೇಶದ ಸುಮಾರು 400 ಜನರ ಆಧ್ಯಾತ್ಮಿಕ, ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸಿ ಸರ್ವ ಧರ್ಮೀಯರ ಗೌರವಕ್ಕೆ ಪಾತ್ರರಾದರು. ಹಲವಾರು ವರ್ಷಗಳ ಕಾಲ ಆಗಾಗ್ಗೆ ಈ ಮನೆಯಲ್ಲಿ ಪಾಸ್ತವ್ಯವನ್ನು ಹೂಡಿ ಲ್ಯಾಟಿನ್ ಹಾಗೂ ತುಳು ಭಾಷೆಯಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದ 200 ವರ್ಷಗಳಿಗೂ ಹಳೆಯದಾದ ಮೇಜನ್ನು ಇಂದಿಗೂ ಇಲ್ಲಿ ಸುಸ್ಥಿತಿಯಲ್ಲಿ ಕಾಣಬಹುದು. ಇದೇ ರೀತಿ ಬೇರ್ಕಳದಲ್ಲಿಯೂ ಅವರ ಸೇವೆ ಇಂದಿಗೂ ಸ್ಮರಿಸಲ್ಪಡುತ್ತದೆ.


ಮಡಂತ್ಯಾರಿನ ಧರ್ಮಕೇಂದ್ರ
ಮಡಂತ್ಯಾರು ಧರ್ಮಕೇಂದ್ರ ಅಸ್ತಿತ್ವವನ್ನು ಪಡೆದಾಗ ಬಹಳಷ್ಟು ವಿಸ್ತಾರವಾಗಿತ್ತು. 1895ರ ದಾಖಲೆಗಳ ಪ್ರಕಾರ ಮಡಂತ್ಯಾರು ಧರ್ಮಕೇಂದ್ರÀದಲ್ಲಿ ಒಂಭತ್ತು ವಾರ್ಡ್‍ಗಳಿದ್ದು 244 ಕಥೋಲಿಕ್ ಕುಟುಂಬಗಳು ಇದ್ದವು. ಪ್ರಾದೇಶಿಕ ಬದಲಾವಣೆಗೆ ಒಳಪಟ್ಟ ಈ ಕೇಂದ್ರ ಆಗಾಗ್ಗೆ ಪುನರ್ ವಿಂಗಡಣೆಯಾಗಿ 125 ವರ್ಷಗಳ ಹಿಂದೆ ಇದ್ದ ಭೂಪ್ರದೇಶ ಇಂದು ಬಹಳಷ್ಟು ಕಡಿಮೆಯಾಗಿದೆ. ಆದರೆ ಕಥೋಲಿಕ್ ಕುಟುಂಬಗಳು ಇದ್ದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಸ್ತುತ 22 ವಾರ್ಡ್‍ಗಳಲ್ಲಿ 700 ಕ್ರೈಸ್ತ ಕುಟುಂಬಗಳ ಮೂಲಕ 3000 ಭಕ್ತಾದಿಗಳು ವಾಸಿಸುತ್ತಾರೆ. ಕೆ.ಜಿ.ಯಿಂದ ಪಿ.ಜಿ.ವರೆಗೆ ಸುಮಾರು 4500 ವಿದ್ಯಾರ್ಥಿಗಳು ವಿಧ್ಯಾರ್ಜನೆಗೈಯುತ್ತಿದ್ದಾರೆ. ಸುಮಾರು 300 ಕ್ಕೂ ಅಧಿಕ ಜನರಿಗೆ ಈ ಪುಣ್ಯಸ್ಥಳ ಉದ್ಯೋಗಾವಕಾಶಕ್ಕೆ ಆಸರೆಯನ್ನೊದಗಿಸಿದೆ.


ನೂರ ಇಪ್ಪತ್ತೈದು ವರ್ಷಗಳ ಉನ್ನತಿಯ ಸಾಧನಾ ಪಥದಲ್ಲಿ ನಿಷ್ಕಲ್ಮಶ ಸೇವೆ ಸಲ್ಲಿಸಿರುವ ಹಲವಾರು ಧರ್ಮಗುರುUಳು ಸ್ಮರಣೀಯ. ನಿಸ್ವಾರ್ಥ ಸೇವೆ, ಪರಿಶ್ರಮದ ಫಲವಾಗಿ ಧನಾತ್ಮಕ ಅಭಿವೃದ್ಧಿ ಇಲ್ಲಿ ಸಾಧ್ಯವಾಗಿದೆ.


ಧರ್ಮಕೇಂದ್ರದ ಸ್ಥಾಪಕ ಗುರುಗಳು: ಫಾ| ಜೇಕಬ್ ಸಿಕ್ವೇರಾ:
ಪ್ರಪ್ರಥಮವಾಗಿ ಮಡಂತ್ಯಾರಿಗೆ ಆಗಮಿಸಿದ ಫಾ| ರೊಜಾರಿಯೋ ಡಿ’ಸೋಜಾರವರು 1890ನೇ ದಶಂಬರ್ 1 ರಂದು ಫಾ| ಜೇಕಬ್ ಸಿಕ್ವೇರಾರವರಿಗೆ ಧರ್ಮಗುರುಗಳ ಅಧಿಕಾರವನ್ನು ಹಸ್ತಾಂತರಿಸಿದರು.
ಫಾ| ಸಿಕ್ವೇರಾರವರ ಮೊದಲ ಯೋಜನೆ, ಮಡಂತ್ಯಾರಿನಲ್ಲಿ ಕ್ರೈಸ್ತ ದೇವಾಲಯದ ಸ್ಥಾಪನೆ. 1890 ರಲ್ಲಿ ಇಗರ್ಜಿಯ ಶಂಕು ಸ್ಥಾಪನೆ ನೆರವೇರುತ್ತದೆ. ದೈಹಿಕ ಪರಿಶ್ರಮ, ಹಣ, ವಸ್ತುಗಳ ರೂಪದಲ್ಲಿ ಕ್ರೈಸ್ತ ಬಾಂಧವರು ತಮ್ಮ ಕನಸಿಗೆ ರೂಪವನ್ನು ನೀಡಲು ಪ್ರಾರಂಭಿಸಿದಾಗ ದೊಡ್ಡ ಪ್ರಮಾಣದಲ್ಲಿ ಕೊಳ್ಕೆಬೈಲಿನ ಫ್ರಾನ್ಸಿಸ್ ಡಿ’ಸೋಜ (ಪೆÇರ್ಸೊ ಪೆÇರ್ಬು) ಕಾಣಿಕೆಯನ್ನು ನೀಡಿ ಸ್ವತ: ಮೇಲುಸ್ತುವಾರಿಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಮೂರು ವರ್ಷಗಳಲ್ಲೇ ದೇವಾಲಯದ ಕೆಲಸ ಪೂರ್ಣಗೊಂಡು 1893ನೇ ಜನವರಿ 29ರಂದು ಅಂದಿನ ಬಿಷಪ್ ಸ್ವಾಮಿಯವರಾದ ಅತಿ ವಂದನೀಯ ನಿಕೋಲಸ್ ಪಗಾನಿಯವರು ಆಶೀರ್ವದಿಸಿ, ಯೇಸುನಾಥರ ತಿರುಹೃದಯಕ್ಕೆ ದೇವಾಲಯನ್ನು ಸಮರ್ಪಿಸಿದರು.


ಮಡಂತ್ಯಾರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ಪೂಜ್ಯ ಜೇಕಬ್ ಸಿಕ್ವೇರಾರವರಿಗೆ ಸಲ್ಲುತ್ತದೆ. ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಸುಮಾರು 50 ಎಕರೆ ಭೂಮಿಯನ್ನು ದರ್ಖಾಸ್ತುಗೊಳಿಸಿ ಧರ್ಮಕೇಂದ್ರಕ್ಕೆ ಸಿಗುವಂತೆ ಮಾಡಿದರು. 1898 ಇಸವಿಯಲ್ಲಿ ಗಾರ್ಡಿಯನ್ ಏಂಜಲ್ಸ್ ಶಾಲೆಯನ್ನು ಪ್ರಾರಂಭಿಸಿದ ಅವರು ಅತ್ಯುತ್ತಮ ಸೇವೆಯನ್ನು ಸಲ್ಲಿಸಿ 1900 ಇಸವಿಯಲ್ಲಿ ವರ್ಗಾವಣೆಯಾದರು.
1900 ಡಿಸೆಂಬರ್ 12ರಲ್ಲಿ ಫಾ| ರೊಜಾರಿಯೋ ಲೂವಿಸ್‍ರವರು ಫಾ| ಜೇಕಬ್ ಸಿಕ್ವೇರಾರವರ ಉತ್ತರಾಧಿಕಾರಿಯಾಗಿ ಬಂದರು. 1901ನೇ ಜೂನ್ 1 ರಂದು ಗಾರ್ಡಿಯನ್ ಏಂಜಲ್ಸ್ ಪ್ರೈಮರಿ ಶಾಲೆಗೆ ಸರಕಾರದ ಮಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಅವರು ಯಶಸ್ವಿಯಾದರು. ಇವರ ಅಧಿಕಾರವಧಿ ಮೂರು ವರ್ಷವಾಗಿದ್ದು 1903 ನೇ ಫೆಬ್ರವರಿ 13ರಂದು ಉತ್ತರಾಧಿಕಾರಿಯಾಗಿ ಬಂದ ಫಾ| ಜೋಸೆಫ್ ಫೆರ್ನಾಂಡಿಸ್‍ರವರ ಅಧಿಕಾರಿವಧಿಯೂ ಮೂರೇ ವರ್ಷವಾಗಿತ್ತು.


ಶ್ರದ್ಧಾವಂತ ಧರ್ಮಗುರುಗಳು: ಫಾ| ಅಲೋಶಿಯಸ್ ಮಿನೇಜಸ್: 1906 ಜುಲೈ 11ರಂದು ಅಧಿಕಾರ ವಹಿಸಿಕೊಂಡ ಧರ್ಮಗುರುಗಳು ಸುಮಾರು 17 ವರ್ಷಗಳ ಕಾಲ ಧರ್ಮಗುರುಗಳಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿದರು. ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.


ಶ್ರದ್ಧಾಮೂರ್ತಿಯಾಗಿರುವ ಇವರು ದೀನ ದುರ್ಬಲ ವರ್ಗದವರ ಏಳಿಗೆಗೆ ಹಾತೊರೆದರು. ವಯೋವೃದ್ಧರಿಗೆ ಚರ್ಚಿಗೆ ಬರಲು ಕಷ್ಟಸಾಧ್ಯವಾಗುವವರಿಗೆ ಸಂದರ್ಶಿಸಿ ಪ್ರಸಾದÀವನ್ನು ನೀಡುವಲ್ಲಿ ಶ್ರದ್ಧೆ ವಹಿಸಿದರು. ಧಾರ್ಮಿಕ ಜಾಗೃತಿ, ಶಿಕ್ಷಣವನ್ನು ಪ್ರಸರಿಸಿದರು. ಒಬ್ಬಂಟಿಗರಾಗಿ ಕೆಲಸ ನಿರ್ವಹಿಸಿ ಕಾಲ್ನಡಿಗೆಯಲ್ಲಿಯೇ ಅವಿರತ ಪರಿಶ್ರಮ ಸಲ್ಲಿಸಿದುದರ ಪರಿಣಾಮ ದೈಹಿಕ ಆರೋಗ್ಯ ಹದಗೆಟ್ಟು 1923ರಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. 1924 ಆಗಸ್ಟ್ 12ರಂದು ಕಾರ್ಯ ನಿರ್ವಾಹಕ ಧರ್ಮಗುರುಗಳಾಗಿ ಫಾ| ಡೇನಿಸ್ ಡಿಸೋಜರವರನ್ನು ನೇಮಕ ಮಾಡಲಾಯಿತು. ಕರ್ತವ್ಯನಿಷ್ಠರಾಗಿ ಶೃದ್ಧೆಯಿಂದ ಜನರ ಧಾರ್ಮಿಕ ಜೀವನವನ್ನು ಬೆಳಗಿಸಿದ ಕೀರ್ತಿ ಫಾ| ಅಲೋಶಿಯಸ್ ಮಿನೇಜಸ್‍ರವರಿಗೆ ಸಲ್ಲುತ್ತದೆ.


ಸಾರ್ವತ್ರಿಕ ವ್ಯಕ್ತಿ: ಫಾ| ಡೇನಿಸ್ ಡಿಸೋಜ:- 1925ನೇ ಫೆಬ್ರವರಿ 20ರಂದು ಫಾ| ಡೇನಿಸ್ ಡಿಸೋಜರವರು ಅಧಿಕಾರ ವಹಿಸಿಕೊಂಡರು. 18 ವರ್ಷಗಳ ದೀರ್ಘ ಆಡಳಿತಾವಧಿಯಲ್ಲಿ ಧರ್ಮಕೇಂದ್ರ ಹಲವಾರು ವಿಷಯಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. 1927-30 ಮತ್ತು 37ರ ಭೌಗೋಳಿಕ ಬದಲಾವಣೆಯ ಪರಿಣಾಮ ಮಡಂತ್ಯಾರು ಧರ್ಮಕೇಂದ್ರ ಹಲವಾರು ಕುಟುಂಬಗಳು ಹತ್ತಿರದ ಧರ್ಮಕೇಂದ್ರಗಳಿಗೆ ಹಂಚಿ ಹೋದವು. ನೈಸರ್ಗಿಕ ಬೆಳವಣಿಗೆ ಮತ್ತು ವಲಸೆಯಿಂದಾಗಿ ಕುಟುಂಬಗಳ ಸಂಖ್ಯೆ ಹೆಚ್ಚಿ ಇಗರ್ಜಿಯ ಕಟ್ಟಡವು ಸಾಕಾಗದಾಯಿತು. ಹೊಸ ಇಗರ್ಜಿಗೋಸ್ಕರ 5 ಎಕ್ರೆ ಭೂಮಿಯನ್ನು ಫಾ| ಡೇನಿಸ್ ಡಿಸೋಜಾರವರು ಖರೀದಿಸಿದರು. 1938 ಸಪ್ಟೆಂಬರ್ 8 ರಂದು ಹೊಸ ಇಗರ್ಜಿಯ ಶಂಕುಸ್ಥಾಪನೆ ಮಾಡಲಾಯಿತು. ಹಣ ಮತ್ತು ವಸ್ತುಗಳ ರೂಪದÀಲ್ಲದೆ ನೂರಾರು ಆಳುಗಳ ಶ್ರಮದಾನದ ಮೂಲಕ ಪ್ರತಿ ಕುಟುಂಬವು ತನ್ನ ಸಹಕಾರ ನೀಡಿತು. ಧರ್ಮಗುರುಗಳ ಹೊಸ ವಸತಿ ಗೃಹದ ಕಟ್ಟಡದ ಕೆಲಸ ಇದೇ ಸಂದರ್ಭಲ್ಲಿ ಪ್ರಾರಂಭಿಸಿದರು. ಕೇವಲ ಎರಡು ವರ್ಷಗಳಲ್ಲಿ ಹೊಸ ಚರ್ಚ್ ಹಾಗೂ ಧರ್ಮಗುರುಗಳ ಹೊಸ ವಸತಿ ಗೃಹವನ್ನು 1940 ಮೇ 7 ರಂದು ಅಂದಿನ ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂದನೀಯ ವಿಕ್ಟರ್ ಫೆರ್ನಾಂಡಿಸ್‍ರವರು ಆಶೀರ್ವದಿಸಿ ಉದ್ಘಾಟಿಸಿದರು.


ಕ್ರಿ.ಶ. 1937 ರಲ್ಲಿ ಗಾರ್ಡಿಯನ್ ಏಂಜಲ್ಸ್ ಶಾಲೆಯು ಫಾ| ಡೇನಿಸ್ ಡಿಸೋಜರ ಶ್ರಮದ ಫಲವಾಗಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡು ಹೊಂದಿತು. ಈ ಸಂದರ್ಭದಲ್ಲಿ ಫಾ| ಎಲೋಶಿಯಸ್ ಪಿಂಟೋರವರು ಮಡಂತ್ಯಾರಿಗೆ ಸಹಾಯಕ ಧರ್ಮಗುರುಗಳಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ನೇಮಿಸಲ್ಪಟ್ಟರು. 1936ರಲ್ಲಿ ಮಂಗಳೂರಿನ ಅರ್ಸುಲೈನ್ ಸಿಸ್ಟರ್ಸ್‍ರವರು ಮಡಂತ್ಯಾರಿನಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಆಧ್ಯಾತ್ಮಿಕ ಸೇವೆಯೊಂದಿಗೆ ಶಾಲೆಯಲ್ಲೂ ಭೋದಿಸಲು ಪ್ರಾರಂಭಿಸಿದರು. 1940ರಲ್ಲಿ ಫಾ| ಮೈಕಲ್ ನೊರೊನ್ಹಾರವರು ಸಹಾಯಕ ಧರ್ಮಗುರುಗಳಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಆಗಮಿಸಿದರು. ಇವರ ನಿಸ್ವಾರ್ಥ ಸೇವೆಯಿಂದ ಈ ಪ್ರದೇಶದಲ್ಲಿ ಇದೊಂದು ಮಾದರಿ ಶಾಲೆಯೆಂಬ ಕೀರ್ತಿಯನ್ನು ಪಡೆಯಿತು. ಪರಿಣಾಮ ಹಿಂದಿನಿಂದ ಇಲ್ಲಿ ಇರುವ, ಜೆಜ್ವಿತ್ ಧರ್ಮಗುರುಗಳ ಬಂಗ್ಲೆಯಲ್ಲಿ ತರಗತಿಗಳನ್ನು ನಡೆಸಲು ಸ್ಥಳಾವಕಾಶದ ಕೊರತೆ ಉಂಟಾಯಿತು. ಹೊಸ ಇಗರ್ಜಿ ಕಟ್ಟಡ ನಿರ್ಮಾಣವಾದ ಬಳಿಕ ತರಗತಿಗಳನ್ನು ಹಳೆ ಇಗರ್ಜಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.


ಕೊಳ್ಕೆಬೈಲಿನಲ್ಲಿರುವ ಕ್ರೈಸ್ತ ಬಾಂಧವರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಫಾ| ಡೇನಿಸ್ ಡಿಸೋಜಾರವರು ಪಿಲಾತಬೆಟ್ಟು ಗ್ರಾಮದಲ್ಲಿರುವ ನೈನಾಡು ಎಂಬಲ್ಲಿ 1927ರಲ್ಲಿ ಸಂತ ಜೋಸೆಫ್ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಫಾ| ಗವಿರಾಗಿಯವರು ಗರ್ಡಾಡಿಯಲ್ಲಿ 1920ರಲ್ಲಿ ಹರಿಜನ ಮಕ್ಕಳಿಗಾಗಿ ತೆರೆದಿದ್ದ ಸಂತ ಅಂತೋನಿ ಪ್ರಾಥಮಿಕ ಶಾಲೆಯ ಸಂಪೂರ್ಣ ಉಸ್ತುವಾರಿಯನ್ನು ಫಾ| ಡೇನಿಸ್ ಡಿಸೋಜಾರವರು ವಹಿಸಿಕೊಂಡರು. 1942 ಮೇ 26ರಂದು ಫಾ| ಡೇನಿಸ್‍ರವರು ಧರ್ಮಕೇಂದ್ರದ ಅಧಿಕಾರವನ್ನು ಫಾ| ಗಾಸ್ಪರ್ ಪಿಂಟೋರವರಿಗೆ ಹಸ್ತಾಂತರಿಸಿದರು.


ನಿಷ್ಠಾವಂತ ಧರ್ಮಗುರುಗಳು: ಫಾ ಗಾಸ್ಪರ್ ಪಿಂಟೊ
ಇವರ ಆಗಮನ 1942 ಮೇ 26ರಂದು ಸಾಕಷ್ಟು ಕೆಲಸ ಕಾರ್ಯಗಳು ಇವರ ಆಗಮನದ ನಿರೀಕ್ಷೆಯಲ್ಲಿದ್ದವು. ಅತಂತ್ರ ಪರಿಸ್ಥಿತಿಯಲ್ಲಿ ಎದೆಗುಂದದೆ ಧರ್ಮಕೇಂದ್ರದಲ್ಲಿ ಸಾಕಷ್ಟು ಹಣವಿಲ್ಲದಿದ್ದರೂ ಸಂಪೂರ್ಣಗೊಂಡಿರದ ಕೆಲಸಕಾರ್ಯಗಳನ್ನು ನಿರ್ವಹಿಸುವಲ್ಲಿ ಸಫಲರಾದರು. ಇಗರ್ಜಿಯ ಕಟ್ಟಡದ ಕಾರ್ಯ, ಅಳಿದುಳಿದ ಕಾರ್ಯಗಳು ನಿರ್ವಹಿಸುವ ಸಂದರ್ಭ ಸಹಾಯಕ ಧರ್ಮಗುರುಗಳಾಗಿದ್ದ ಫಾ| ಮೈಕಲ್ ನೊರೊನ್ಹಾರವರು ಆಕಸ್ಮಿಕ ಅಪಘಾತಕ್ಕೆ ಸಿಲುಕಿದರಿಂದ 1945 ರಲ್ಲಿ ನಿರ್ಗಮಿಸಬೇಕಾಯಿತು. ನಂತರ ಬಂದ ಫಾ| ವಿಕ್ಟರ್ ಮೆಂಡೋನ್ಸಾರವರು ಅಸೌಖ್ಯದ ನಿಮಿತ್ತ ಅತ್ಯಲ್ಪ ಅವಧಿಯಲ್ಲಿ ನಿರ್ಗಮಿಸಿದರು. ಈ ಸಂದರ್ಭ ಕಠಿಣ ಪರಿಸ್ಥಿತಿಯಲ್ಲಿ ಮುಖ್ಯೋಪಾಧ್ಯಾಯರು, ಸಹಾಯಕ ಧರ್ಮಗುರುಗಳ ಅನುಪಸ್ಥಿತಿಯಲ್ಲಿ ಶಾಲೆಗೆ ಉತ್ತಮ ಸೌಲಭ್ಯವನ್ನು ಒದಗಿಸಿದರು. ಗಾರ್ಡಿಯನ್ ಏಂಜಲ್ಸ್ ಶಾಲೆಯ ವಿಸ್ತರಣೆ, 1959 ರಲ್ಲಿ ಗರ್ಡಾಡಿಯಲ್ಲಿರುವ ಸಂತ ಅಂತೋನಿ ಶಾಲೆಯ ಹೊಸ ಕಟ್ಟಡದ ಕೆಲಸ ಪೂರ್ಣಗೊಳಿಸಿದರು.


1955 ರಲ್ಲಿ ಅರ್ಸುಲೈನ್ ಸಿಸ್ಟರ್ಸ್ ಮಡಂತ್ಯಾರನ್ನು ಬಿಟ್ಟು ಹೋದ ಸಂದರ್ಭ ಫಾ| ಪಿಂಟೋರವರ ನಂಬಿಕೆಯನ್ನು ಇನ್ನೊಮ್ಮೆ ಪರೀಕ್ಷೆಗೆ ಈಡು ಮಾಡುವಂತಾಯಿತು. 1949ರಲ್ಲಿ ಸಹಾಯಕ ಧರ್ಮಗುರುಗಳಾಗಿ ಆಗಮಿಸಿ ಫಾ| ಲಿಗೋರಿ ಡಿಸೋಜಾರವರು 1951 ರ ತನಕ ಸೇವೆ ಸಲ್ಲಿಸಿದರು. ನಂತರ ಫಾ| ಅಲೆಕ್ಸಾಂಡರ್ ಸಿಕ್ವೇರಾ, ಫಾ| ಫೆಲಿಕ್ಸ್ ಕೊನ್ಸೆಸೊ, ಫಾ| ಚಾಲ್ರ್ಸ್ ಡಿಸೋಜಾ ಮತ್ತು ಫಾ| ಲಿಗೋರಿ ಮಿನೇಜಸ್ ಸೇವೆ ಸಲ್ಲಿಸಿದರು.


1959ರಲ್ಲಿ ಫಾ| ಗಾಸ್ಪರ್ ಪಿಂಟೋರವರು ರಾಣಿಪುರಕ್ಕೆ ವರ್ಗಾವಣೆಯಾದರು. ಹೊಸ ಇಗರ್ಜಿ ಕಟ್ಟಡದ ಕೆಲಸ ಸಂಪೂರ್ಣಗೊಳಿಸಿದ ಇವರು ಸರಳ ವ್ಯಕ್ತಿತ್ವ ಮತ್ತು ಅನನ್ಯ ನಂಬಿಕೆಯಿಂದಾಗಿ ಧರ್ಮಕೇಂದ್ರದ ಜನರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರರಾದರು. ಬಡವರು ಮತ್ತು ಅಸಹಾಯಕರಿಗೆ ಪ್ರತ್ಯೇಕವಾಗಿ ತುಳು ಕ್ರೈಸ್ತರಲ್ಲಿ ಅವರಿಗಿದ್ದಂತಹ ಅನುಕಂಪ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ.


ಜನಪ್ರಿಯ ಧರ್ಮಗುರುಗಳು: ಫಾ| ವಿಲಿಯಂ ವೇಗಸ್:
ಕ್ರಿ.ಶ. 1959 ಮೇ 15ರಂದು ಧರ್ಮಕೇಂದ್ರದ ಧರ್ಮಗುರುಗಳಾಗಿ ಫಾ| ವಿಲಿಯಂ ವೇಗಸ್‍ರವರು ಅಧಿಕಾರ ವಹಿಸಿಕೊಂಡರು. ಸದಾ ಹಸನ್ಮುಖಿಗಳಾಗಿದ್ದ ಗುರುಗಳು ಸರಳ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರು. ಅವರ ಸರಳತೆಯೇ ಅವರನ್ನು ಜನಾನುರಾಗಿಯನ್ನಾಗಿಸಿತು. ದ್ವನಿವರ್ಧಕ ವ್ಯವಸ್ಥೆ ಮತ್ತು ವಿದ್ಯುದ್ವೀಪದ ವ್ಯವಸ್ಥೆಯನ್ನು ಮಾಡಿದರು. ಶಾಲಾಭಿವೃದ್ಧಿಗೋಸ್ಕರ ತಮ್ಮಿಂದಾದ ಪ್ರಯತ್ನವನ್ನು ಮಾಡಿದರು. ಅವರ ಧಾರ್ಮಿಕ ಸೇವೆ ಸರ್ವಶ್ರೇಷ್ಠವಾಗಿತ್ತು.


ನಾಳಾದ ಕಥೋಲಿಕ್ ಬಾಂಧವರಿಗೆ ಮಡಂತ್ಯಾರು ಇಗರ್ಜಿಗೆ ಬಂದು ಪ್ರಾರ್ಥನಾವಿಧಿ ಮತ್ತು ಸಮಾರಂಭಗಳಲ್ಲಿ ಭಾಗವಹಿಸಲು ತೊಂದರೆಯಾದಾಗ ಸ್ವತಃ ನಾಳಾದ ಗುರಿಕಾರರ ಮನೆಯಲ್ಲಿ 1969 ಫೆಬ್ರವರಿ 13 ಗುರುವಾರದಂದು ಪ್ರಥಮ ಬಾರಿಗೆ ಪೂಜೆ ಸಲ್ಲಿಸಲಾಯಿತು.


1961ರಲ್ಲಿ ಪ್ರಥಮ ಬಾರಿಗೆ ಮಡಂತ್ಯಾರಿನ ಅಭ್ಯರ್ಥಿ ಫಾ| ಪಾಸ್ಕಲ್ ಮೆಂಡೋನ್ಸಾರವರು ಗುರು ದೀಕ್ಷೆ ಪಡೆಯುವುದನ್ನು ನೋಡುವ ಸೌಭಾಗ್ಯ ಫಾ| ವೇಗಸ್‍ರವರಿಗೆ ಸಿಕ್ಕಿತು. ಅವರಿಗೆ ಸಮರ್ಥ ಸಹಾಯಕ ಧರ್ಮಗುರುಗಳಾಗಿ ಫಾ| ಲಿಗೋರಿ ಮಿನೇಜಸ್, ಫಾ| ಎಲಿಯಾಸ್ ಡಿಸೋಜ, ಫಾ| ಸ್ಟೇನಿ ಪಿರೇರಾ, ಫಾ| ರೈಮಂಡ್ ಮೋರಾಸ್, ಫಾ| ಜೋನ್ ಮಾರ್ಟಿಸ್, ಫಾ| ಡೇನಿಸ್ ಮೋರಾಸ್, ಫಾ| ಜೆ. ಬಿ. ಡಿ’ಸೋಜಾರವರು ಸೇವೆ ಸಲ್ಲಿಸಿದರು.


ಆಧುನಿಕ ಮಡಂತ್ಯಾರಿನ ಶಿಲ್ಪಿ: ಫಾ| ಲಿಗೋರಿ ಡಿ’ಸೋಜಾ:
1972 ಮೇ 10 ರಂದು ಫಾ| ಲಿಗೋರಿ ಡಿ’ಸೋಜಾ ರವರು ಧರ್ಮಗುರುಳಾಗಿ ಫಾ| ವೇಗಸ್‍ರವರ ಉತ್ತರಾಧಿಕಾರಿಯಾಗಿ ಆಗಮಿಸಿದರು. ತೀರಾ ಹಳ್ಳಿಯೆನಿಸಿದ ಮಡಂತ್ಯಾರು, ಫಾ| ಲಿಗೋರಿ ಡಿ’ಸೋಜಾರವರ 11 ವರ್ಷಗಳ ಸುದೀರ್ಘ ಸೇವೆಯಿಂದ ಆಧುನಿಕ ನಗರ ಮತ್ತು ಶೈಕ್ಷಣಿಕ ಕೇಂದ್ರವಾಗಿ ಮಾರ್ಪಡಲ್ಪಟ್ಟಿತು.


ಜನರ ಧಾರ್ಮಿಕ ಕಾಳಜಿಗೆ ಉತ್ತೇಜನವಿತ್ತ ಫಾ| ಲಿಗೋರಿ ಡಿ’ಸೋಜಾರವರು ಮಡಂತ್ಯಾರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ನೈನಾಡು ಮತ್ತು ನಾಳಗಳಲ್ಲಿ ಪ್ರತೀ ಆದಿತ್ಯವಾರ ಪೂಜೆ ಸಲ್ಲಿಸುವದರ ಮೂಲಕ ಧಾರ್ಮಿಕ ಪ್ರಜ್ಞೆ ಮೂಡಿಸಿದರು. 1977ರಲ್ಲಿ ನೈನಾಡಿನ ಪ್ರಾನ್ಸಿಸ್ಕನ್ ಬ್ರದರ್ಸ್‍ರವರು ಬಂದ ಸಂದರ್ಭದಲ್ಲಿ ಆ ಪ್ರದೇಶದ ಜನರಿಗೋಸ್ಕರ ಪ್ರಾರ್ಥನಾ ಮಂದಿರವನ್ನು ತೆರೆಯುವಂತೆ ಮನವೊಲಿಸಿದರು. ನಾಳಾದಲ್ಲಿ ಶ್ರೀ ಜೆರೊಮ್ ಪಾಯ್ಸ್‍ರವರು ದಾನವಾಗಿ ಕೊಟ್ಟ ಸ್ಥಳದಲ್ಲಿ ಸಂತ ಆನ್ನಾರ ಪ್ರಾರ್ಥನಾ ಮಂದಿರ ನಿರ್ಮಿಸಿ, 1982 ಮೇ 5 ರಂದು ಉದ್ಘಾಟಿಸಿ, ಆಶೀರ್ವಾದಿಸಲ್ಪಟ್ಟಿತು.


ಧರ್ಮಪ್ರಜೆಗಳಲ್ಲಿ ಐಕ್ಯತೆ ಹಾಗೂ ಒಗ್ಗಟ್ಟನ್ನು ಬಲಪಡಿಸಲು ಕ್ರಿ. ಶ. 1978 ರಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ವ್ಯವಸ್ಥೆಯನ್ನು ಏರ್ಪಡಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಬಡ ರೈತರÀ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿಸಿದರು.


ಶೈಕ್ಷಣಿಕ ಗುಣಮಟ್ಟಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಗಾರ್ಡಿಯನ್ ಏಂಜಲ್ಸ್ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಿದರು. 1978ರಲ್ಲಿ ನೈನಾಡಿನ ಸಂತ ಜೋಸೆಫ್ ಮತ್ತು ಗರ್ಡಾಡಿ ಸಂತ ಅಂತೋನಿ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾರ್ಪಡಿಸಿದರು.


ಮಡಂತ್ಯಾರಿಗೆ ಉನ್ನತ ಶಿಕ್ಷಣ ಪ್ರಾಪ್ತಿಯ ಕನಸನ್ನು ಹೊಂದಿದ್ದ ಫಾ| ಲಿಗೋರಿ ಡಿ’ಸೋಜರವರು 1980 ರಲ್ಲಿ ಮಡಂತ್ಯಾರಿನ ರೂಪವನ್ನೇ ಬದಲಾಯಿಸಬಲ್ಲ ಯೋಜನೆಯನ್ನು ಯೇಸುವಿನ ತಿರುಹೃದಯದಲ್ಲಿ ನಂಬಿಕೆಯಿಟ್ಟು ಕಾರ್ಯರೂಪಕ್ಕೆ ತರುವಲ್ಲಿ ದೃಢ ಹೆಜ್ಜೆಯಿಟ್ಟರು.


ಮಂಗಳೂರು ಧರ್ಮಪ್ರಾಂತ್ಯದ ಧಮಾಧ್ಯಕ್ಷರಿಂದ ಅನುಮತಿ ಪಡೆದು ಕಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಮುಖಾಂತರ ಪ್ರೌಢ ಶಾಲೆ, ಪದವಿಪೂರ್ವ ಮಹಾ ವಿದ್ಯಾಲಯ, ಮತ್ತು ಪದವಿ ಮಹಾವಿದ್ಯಾಲಯವನ್ನು ತೆರೆಯಲು ಕರ್ನಾಟಕ ಸರಕಾರಕ್ಕೆ ಅರ್ಜಿ ಸಲ್ಲಿಸಿದರು. ಇದರ ಫಲವಾಗಿ 1981 ಜೂನ್ 29 ರಂದು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ ತನ್ನ ಜ್ಞಾನಾಮೃತವನ್ನೀಯಲು ಕೈ ಬೀಸಿ ಕರೆಯಿತು. ಕೆಲ ದಿನಗಳ ನಂತರ 1981 ಜುಲಾಯ್ 4 ರಂದು ಪ್ರೌಢ ಶಾಲೆಯನ್ನು ಪದವಿ ಪೂರ್ವ ಮಹಾವಿದ್ಯಾಲಯವನ್ನಾಗಿ ಪರಿವರ್ತಿಸಲಾಯಿತು. ಒಂದು ವರ್ಷದ ನಂತರ, 1982 ಜುಲಾಯ್ ತಿಂಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಸೇಕ್ರೆಡ್ ಹಾರ್ಟ್ ಕಾಲೇಜು ಆರಂಭಿಸಲ್ಪಟ್ಟಿತ್ತು.


ಫಾ| ಲಿಗೋರಿಯವರು ಮಡಂತ್ಯಾರಿಗೆ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸುವಾಗ ಫಾ| ಜೆ. ಬಿ. ಡಿ’ಸೋಜಾರವರು ಸಹಾಯಕ ಧರ್ಮಗುರುಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ತದ ನಂತರ ಸಹಾಯಕ ಧರ್ಮಗುರುಗಳಾಗಿ ಫಾ| ನೋರ್ಬಟ್ ಫೆರ್ನಾಂಡಿಸ್, ಫಾ| ಜೋನ್ ನೊರೊನ್ಹಾ, ಫಾ| ವಿಲಿಯಂ ಬರ್ಬೊಜಾ, ಫಾ| ವಿಲ್ಫ್ರೆಡ್ ಗೊನ್ಸಾಲ್ವಿಸ್, ಫಾ| ಪೀಟರ್ ಫೆರ್ನಾಂಡಿಸ್ ಮತ್ತು ಫಾ| ಚಾಲ್ರ್ಸ್ ನೊರೊನ್ಹಾರವರು ಸೇವೆಯನ್ನು ಸಲ್ಲಿಸಿದರು. 1981ರಲ್ಲಿ ಫಾ| ಎಲ್. ಎ. ರಸ್ಕಿನ್ಹಾ (S.ಎ.) ಕೆಲ ಸಮಯ ಫಾ| ಲಿಗೋರಿಯವರಿಗೆ ಶೈಕ್ಷಣಿಕ ವಿಷಯದಲ್ಲಿ ಸಹಾಯ ಹಸ್ತ ನೀಡಿದರು.


ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಮಹಾ ವಿದ್ಯಾಲಯ ಅಸ್ತಿತ್ವಕ್ಕೆ ಬಂದಾಗ ಪ್ರಾಂಶುಪಾಲರ ಅಗತ್ಯದ ಸಂದರ್ಭ ಫಾ| ಲೊರೆನ್ಸ್ ರೊಡ್ರಿಗಸ್‍ರವರು ಸಮರ್ಥವಾಗಿ ಆ ಹುದ್ದೆಯನ್ನು ಅಲಂಕರಿಸಿ ಸುದೀರ್ಘ ಸೇವೆಯನ್ನು ನೀಡಿರುತ್ತಾರೆ. ಅವರು ಕ್ರಿ. ಶ. 1982 ರಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿಯೂ ಸೇವೆಯನ್ನು ಸಲ್ಲಿಸಿರುತ್ತಾರೆ.


ಅಪಾರ ಭಕ್ತಿಯ ಮೂರ್ತ ರೂಪ ಫಾ| ಲಿಗೋರಿ ಡಿ’ಸೋಜಾರವರು ಅಧ್ಯಾತ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನೇ ಮೂಡಿಸಿ ವ್ಯಾಪಕ ಅಭಿವೃದ್ಧಿಯಿಂದ ಸಮೃದ್ಧಿ ಭರಿತ ಮಡಂತ್ಯಾರಿನ ಏಳಿಗೆಗೆ ಕಾರಣಕರ್ತರಾಗಿ “ಮಡಂತ್ಯಾರಿನ ಶಿಲ್ಪಿ” ಎಂದೆನಿಸಿದರು.


ಫಾ| ಲಿಗೋರಿಯವರು ನೂತನ ಪದವಿ ಪೂರ್ವ ಕಾಲೇಜಿಗೆ ಒಂದು ಹೊಸ ಕಟ್ಟಡದ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಮೂರು ಅಂತಸ್ತುಗಳ ಕಟ್ಟಡ ನಿರ್ಮಿಸುವ ಬೃಹತ್ ಯೋಜನೆಯನ್ನು ಸಿದ್ದಪಡಿಸಿದ್ದರು. ಆದರೆ ಆ ಯೋಜನೆಗಳು ಕಾರ್ಯರೂಪಕ್ಕೆ ಬರುವ ಮೊದಲೇ ಅವರನ್ನು ಮಂಗಳೂರಿನ ಕುಲಶೇಖರ ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡರು.


ವಂದನೀಯ ಫಾ| ಲಿಗೋರಿ ಡಿ’ಸೋಜಾರವರು ತಮ್ಮ ಸ್ಮರಣೀಯ 11 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವುದರ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತುಂಗಕ್ಕೇರಿಸಿದ ಕೀರ್ತಿಗೆ ಪಾತ್ರರಾದರು. ಮಡಂತ್ಯಾರಿಗೆ ಉನ್ನತ ಶಿಕ್ಷಣದ ಭಾಗ್ಯವನ್ನು ಕಲ್ಪಿಸಿ ಸಾವಿರಾರು ಜ್ಞಾನದಾಹಿಗಳು ಸುಪ್ರೀತಗೊಂಡು ದೇಶ ವಿದೇಶಗಳಲ್ಲಿ ತಮ್ಮ ಜೀವನ ವೃತ್ತಿಯನ್ನು ಕಂಡುಕೊಳ್ಳಲು ಕಾರಣಕರ್ತರಾಗಿದ್ದಾರೆ. ಅವರ ಧಾರ್ಮಿಕ ಪ್ರಜ್ಞೆ, ಆದ್ಯಾತ್ಮಿಕ ಪ್ರೊತ್ಸಾಹ ಅಪಾರ. ಅಪೂರ್ವ ಸೇವೆ ಸ್ಮರಣೀಯವಾಗಿರುವುದಲ್ಲದೆ ಇತಿಹಾಸದ ಪುಟಗಳಲ್ಲಿ, ಜನರ ಹೃದಯಗಳಲ್ಲಿಅಜರಾಮರ. ಪೂಜ್ಯರು 1985 ರ ಸೆಪ್ಟೆಂಬರ್ 2 ರಂದು ಇಹಲೋಕವನ್ನು ತ್ಯಜಿಸಿದರು. ದುಃಖಭರಿತ ಮಡಂತ್ಯಾರಿನ ಜನತೆ ಮಡಂತ್ಯಾರಿನ ಆಧುನಿಕ ಶಿಲ್ಪಿಗೆ ಅಂತಿಮ ನಮನಗಳನ್ನು ಸಲ್ಲಿಸಲು ಕುಲಶೇಖರಕ್ಕೆ ಧಾವಿಸಿದರು. ಗೌರವಪೂರ್ವಕವಾಗಿ ದುಃಖದ ವಾರ್ತೆಯ ಪ್ರಯುಕ್ತ ಮಡಂತ್ಯಾರಿನ ಪೇಟೆಯಿಡೀ ಮುಚ್ಚಲ್ಪಟ್ಟಿತ್ತು.


1983 ಎಪ್ರಿಲ್ 25 ರಂದು ಫಾ| ಲಿಗೋರಿಯವರು ವರ್ಗಾಯಿಸಲ್ಪಟ್ಟಾಗ ಫಾ| ಡೆನಿಸ್ ಮೊರಸ್ ಪ್ರಭುರವರು ತಾತ್ಕಾಲಿಕ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದರು. ಅಲ್ಪಾವದಿಯಲ್ಲಿ ಸೇಕ್ರೆಡ್ ಹಾರ್ಟ್ ನೂತನ ಕಟ್ಟಡದ ನಿರ್ಮಾಣಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢಿಕರಿಸಿ, ಸ್ಥಳವನ್ನು ಸಮತಟ್ಟು ಮಾಡಿ, ನೂತನ ಕಟ್ಟಡದ ಶಂಕುಸ್ಥಾಪನೆಗೆ ಸಜ್ಜುಗೊಳಿಸುತ್ತಿದ್ದಂತೆ ಫಾ| ವಿಲ್ಸನ್ ಡಿ’ಸೋಜರವರು ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಪ್ರಾಂಶುಪಾಲರಾಗಿ ಕರ್ತವ್ಯಕ್ಕೆ ಹಾಜರಾದರು.

 

ಆಧುನಿಕ ಮಡಂತ್ಯಾರಿನ ನಿರ್ಮಾತೃ. - ಪೂಜ್ಯ ಡಾ| ಫ್ರೆಡ್ ವಿ. ಪಿರೇರಾ.

ಕ್ರಿ. ಶ. 1983 ಜೂನ್ 3 ರಂದು ಫಾ| ಫ್ರೆಡ್ ವಿ. ಪಿರೇರಾರವರು ಧರ್ಮಗುರುಗಳಾಗಿ, ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿದರು. ಸಂದಿಗ್ದ ಪರಿಸ್ಥಿತಿಯಲ್ಲಿದ್ದ ಮಡಂತ್ಯಾರಿಗೆ ಫಾ. ಫ್ರೆಡ್ ವಿ. ಪಿರೇರಾರವರ ಆಗಮನ ಇಲ್ಲಿನÀ ಜನರ ಸೌಭಾಗ್ಯ. ಅನುಭವೀ ಪೂಜ್ಯರು ಕಾರ್ಯದಕ್ಷತೆಗೆ ಇನ್ನೊಂದು ಹೆಸರು.


ಧಾರ್ಮಿಕ ಜೀವನಕ್ಕೆ ಆದ್ಯತೆ ಕೊಡುವುದರ ಮೂಲಕ ಫಾ| ಫ್ರೆಡ್ ವಿ. ಪಿರೇರಾರವರು ಮಡಂತ್ಯಾರಿನಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಧರ್ಮಕೇಂದ್ರದ ಜನರ ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಇತರ ಸಂಘ ಸಂಸ್ಥೆಗಳಿಂದ ಪರಿಣಾಮಕಾರಿ ಪ್ರಯೋಜನ ಪಡೆದರು. 1983ರ ಪವಿತ್ರ ವರ್ಷದಲ್ಲಿ ಧಾರ್ಮಿಕ ಪುನಶ್ಚೇತನದ ವಿಶೇಷ ಯೋಜನೆಗಳನ್ನು ಪ್ರಕಟಪಡಿಸಿದರು. ಜೇಸುನಾಥರ ಎರಡು ಆಶೀರ್ವದಿತ ಶಿಲುಬೆಗಳನ್ನು ಪ್ರತಿಯೊಂದು ಮನೆಗಳಿಗೂ ತಲುಪಿಸುವ ವ್ಯವಸ್ಥೆ ಮಾಡಿ ಕುಟುಂಬ ಪ್ರಾರ್ಥನೆಯ ಮೂಲಕ ಜನರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿದರು. ಯೇಸುವಿನ ತಿರುಹೃದಯಕ್ಕೆ ಗೌರವ ಪೂರ್ವಕವಾಗಿ ಶೃದ್ಧೆಯಿಂದ ಪ್ರತೀ ಶುಕ್ರವಾರ ವಿಶೇಷ ಭಕ್ತಿಯ ದಿನವಾಗಿ ಆಚರಿಸಲಾಗುತ್ತಿತ್ತು. ಪ್ರತೀ ಬೇಸಿಗೆಯಲ್ಲಿ ಧರ್ಮಕೇಂದ್ರದ ಮಕ್ಕಳಿಗೆ ವಿಶೇಷ ಧಾರ್ಮಿಕ ಶಿಕ್ಷಣ ನೀಡುವುದರ ಮೂಲಕ ಅವರ ಅವಧಿಯಲ್ಲಿ ನೂರಾರು ಯುವಕ ಯುವತಿಯರು ದೇವರ ಸೇವೆಗೆ ಮುಂದಾದರು. 1986-87ರಲ್ಲಿ ನಾಳಾ ಪ್ರಾರ್ಥನಾ ಮಂದಿರವನ್ನು ವಿಸ್ತರಿಸಲಾಯಿತು. ಈತನ್ಮಧ್ಯೆ ನೈನಾಡಿನ ಜನರು ಸ್ವತಂತ್ರ ಧರ್ಮಕೇಂದ್ರ್ರದ ಅಗತ್ಯವನ್ನು ಮನಗಂಡರು. ಫಾ| ಮೈಕಲ್ ನೊರೊನ್ಹಾರವರು ಇಗರ್ಜಿಗಾಗಿ ಅಗತ್ಯವಿರುವ ಸ್ಥಳವನ್ನು ಸರಕಾರದಿಂದ ಪಡೆದು, ಧನ ಸಂಗ್ರಹ ಕಾರ್ಯವನ್ನು ಆರಂಭಿಸಿದರು. ನೈನಾಡಿನ ಸಂತ ಜೋಸೆಫರ ಶಾಲೆಯ ಹತ್ತಿರದ ಪ್ರದೇಶದಲ್ಲಿ ಮಂಗಳೂರು ಧರ್ಮಧ್ಯಕ್ಷರಾದ ಅತೀ ವಂದನೀಯ ಬೇಸಿಲ್ ಡಿ’ಸೋಜಾರವರು 1983 ಅಕ್ಟೋಬರ್ 4 ರಂದು ಇಗರ್ಜಿಯ ಶಂಕುಸ್ಥಾಪನೆಗೈಯುವುದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಇಗರ್ಜಿಯನ್ನು ಧರ್ಮಾಧ್ಯಕ್ಷರೇ ಆಶೀರ್ವದಿಸಿದರು. ಆ ನಂತರ ಧರ್ಮಗುರುಗಳ ವಸತಿಗೃಹದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಯಿತು. ನಂತರ ಸ್ವತಂತ್ರ ಧರ್ಮಕೇಂದ್ರವನ್ನು ಸ್ಥಾಪಿಸುವ ವಿಧಾನ ಪ್ರಾರಂಭಿಸಿ 1988 ಮೇ 10 ರಂದು ನೈನಾಡು ಮತ್ತು ಆಸುಪಾಸಿನ ನೂರಾರು ಕುಟುಂಬಗಳನ್ನು ಮಡಂತ್ಯಾರಿನಿಂದ ಪ್ರತ್ಯೇಕಿಸಿ ಸಂತ ಫ್ರ್ಯಾನ್ಸಿಸ್ ಆಸಿಸಿ ಎಂಬ ಹೊಸ ಧರ್ಮಕೇಂದ್ರÀ್ರವನ್ನು ರೂಪಿಸಲಾಯಿತು. ಈ ನಡುವೆ 1988 ಜನವರಿ 1 ರಿಂದ ಗರ್ಡಾಡಿಯ ಸಂತ ಜೋಸೆಫರ ಶಾಲೆಯಲ್ಲಿ ರವಿವಾರದ ಪೂಜೆ ಪ್ರಾರಂಭಿಸಲಾಯಿತು.


ಫಾ| ಫ್ರೆಡ್ ವಿ. ಪಿರೇರಾರವರು ಜನರ ಮನೆಗಳಿಗೆ ಭೇಟಿಯಿತ್ತು ಜನರ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಉನ್ನತ ವಿದ್ಯಾಭ್ಯಾಸದ ಅವಕಾಶವಿದ್ದರೂ, ಆರ್ಥಿಕವಾಗಿ ದುರ್ಬಲರಾದ ಜನರಿಗೆ ಅದರ ಸೌಲಭ್ಯ ಪ್ರಯೋಜನವಿಲ್ಲವೆಂದರಿತ ಪೂಜ್ಯರು, ಪ್ರತ್ಯೇಕ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. 1985ರಲ್ಲಿ ಈosಣeಡಿ Pಚಿಡಿeಟಿಣshiಠಿ Pಡಿogಡಿಚಿmme ಬಡ ಕುಟುಂಬಗಳನ್ನು ನೋಡಿಕೊಳ್ಳುತ್ತಿತ್ತು. 1984 ರಲ್ಲಿ ಮನೆ ನಿರ್ಮಾಣ ಯೋಜನೆ ಹಾಕಿ ಜಾತಿ ಮತದ ಭೇದವಿಲ್ಲದೆ ಅಗತ್ಯವುಳ್ಳವರಿಗೆ ಬಡ್ಡಿರಹಿತ ಸಾಲಗಳನ್ನು ಕೊಡುವ ವ್ಯವಸ್ಥೆಯನ್ನೂ ಮಾಡಿದರು. ಇದರಿಂದ 200 ಕ್ಕೂ ಅಧಿಕ ಕುಟುಂಬಗಳು ಈ ಎರಡೂ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿವೆ. ಜೂನ್ 1988ರಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಅರ್ನ್ ವೈಲ್ ಯು ಲರ್ನ್ (ಇಚಿಡಿಟಿ ತಿhiಟe ಥಿou ಟeಚಿಡಿಟಿ) ಯೋಜನೆಯ ಪ್ರಯುಕ್ತ ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಸಧೃಡಗೊಂಡು ಉನ್ನತ ವಿದ್ಯಾಭ್ಯಾಸವನ್ನು ಪಡೆಯುವಲ್ಲಿ ಸಶಕ್ತರಾದರು.


ಮಡಂತ್ಯಾರು ಧರ್ಮಕೇಂದ್ರದ ಮೂಲಭೂತ ಸಮಸ್ಯೆಯಾದ ಸಂಪನ್ಮೂಲಗಳ ಕೊರೆತೆ ನೀಗಿಸಲು ಇಗರ್ಜಿಗೆ ಸಂಬಂಧಿಸಿದ ಭೂಮಿಯಲ್ಲಿ ತೆಂಗಿನ ಗಿಡಗಳನ್ನು ಮತ್ತು ಕರಿಮೆಣಸಿನ ತೋಟವನ್ನು ಬೆಳೆಸಿ ಸ್ವಯಂಪೂರ್ಣತೆಯನ್ನು ಸಾಧಿಸುವಲ್ಲಿ ಹೆಜ್ಜೆಯಿಟ್ಟರು.


1983ರ ಜೂನ್ 3 ರಂದು ಡಾ| ಫ್ರೆಡ್. ವಿ. ಪಿರೇರಾರವರು ಅಧಿಕಾರ ಸ್ವೀಕರಿಸಿದಾಗಲೇ ಸೇಕ್ರೆಡ್ ಹಾರ್ಟ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆಯ ಪೂರ್ವ ಸಿದ್ದತೆಯಾಗಿತ್ತು. 1983 ನೇ ಜೂನ್ 10ರಂದು ಅಡಿಗಲ್ಲನ್ನಿಡುವ ಸಮಾರಂಭ ಕನಿಷ್ಟ ಸಂಪನ್ಮೂಲಗಳಿಂದ ಕಟ್ಟಡದ ಕೆಲಸ ಪ್ರಾರಂಭವಾಯಿತು. ವಿಚಲಿತರಾಗದ ಶ್ರೇಷ್ಠ ನಾಯಕತ್ವವುಳ್ಳ ಪೂಜ್ಯರು ದೇವರ ಮೇಲಿನ ವಿಶ್ವಾಸದಿಂದ 1984 ಜೂನ್ 15 ರಂದು ಕಾಲೇಜಿನ ಕೆಳ ಅಂತಸ್ತನ್ನು ಉದ್ಘಾಟನೆಗೊಳ್ಳಲು ಸಜ್ಜುಗೊಳಿಸಿದರು. ದೂರದ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿಕೊಡಲು ಸೇಕ್ರೆಡ್ ಹಾರ್ಟ್ ವಿದ್ಯಾರ್ಥಿನಿಲಯವನ್ನು ತೆರೆಯುವ ಯೋಜನೆ ಹಾಕಿ 1984 ರಲ್ಲಿ ಕೆಳ ಅಂತಸ್ತನ್ನು ನಿರ್ಮಿಸಲಾಯಿತು. ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸ್ಥಳವಕಾಶಕ್ಕಾಗಿ ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಮಹಾ ವಿದ್ಯಾಲಯಕ್ಕೆ ಸ್ವತಂತ್ರ ಕಟ್ಟಡದ ನಿರ್ಮಾಣದ ಅಗತ್ಯ ಕಂಡುಬಂದು 1985 ಜೂನ್ 15ರಂದು ಅಡಿಗಲ್ಲನ್ನಿಡುವ ಸಮಾರಂಭ ನಡೆಸಲಾಯಿತು. ಕೆಲ ತಿಂಗಳಲ್ಲೇ ಪದವಿ ಪೂರ್ವ ಕಾಲೇಜಿನ ಕೆಳ ಅಂತಸ್ತಿನ ಕಟ್ಟಡ ನಿರ್ಮಾಣಗೊಂಡು, ಫಾ| ಫ್ರೆಡ್ ವಿ. ಪಿರೇರಾರವರ ಗುರುದೀಕ್ಷೆಯ ಬೆಳ್ಳಿ ಹಬ್ಬ ಹಾಗೂ ಹುಟ್ಟುಹಬ್ಬದ ಸುವರ್ಣ ಮಹೋತ್ಸವದ ಶುಭಗಳಿಗೆಯ ದಿನ ಉದ್ಘಾಟಿತವಾಗಿ ಆಶೀರ್ವಾದಿಸಲ್ಪಟ್ಟಿತು. ಸಾವಿರಾರು ವಿದ್ಯಾರ್ಥಿಗಳಿಗೆ ಇಂದು ಈ ವಿದ್ಯಾದೇಗುಲ, ತಮ್ಮ ಬಾಳಿನ ಬೆಳಕಾಗಿ ಅತ್ಯುನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ.


ಶತಮಾನೋತ್ಸವವನ್ನು ಆಚರಿಸುವ ಸಂದರ್ಭ ಧರ್ಮಕೇಂದ್ರದಲ್ಲಿ ಡಾ| ಫ್ರೆಡ್ ವಿ. ಪಿರೇರಾರವರ ಉತ್ತಮ ನಾಯಕತ್ವದಲ್ಲಿ ಅನೇಕ ಪುನಶ್ಚೇತನ ಕಾರ್ಯಕ್ರಮಗಳು, ಅಭಿವೃದ್ಧಿ ಚಟುವಟಿಕೆಗಳು, ಸಾರ್ವಜನಿಕ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಸ್ಸು ನಿಲ್ಡಾಣದ ನಿರ್ಮಾಣ, ಕಾಲುದಾರಿಯ ರಚನೆ, ಸೇತುವೆ, ರಸ್ತೆ ನಿರ್ಮಾಣ, ಬಾವಿಗಳ ದುರಸ್ತಿ ಇತ್ಯಾದಿ. ಸೇಕ್ರೆಡ್ ಹಾರ್ಟ್ ಕಾಲೇಜು ಮತ್ತು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯಗಳು, ಅಭಿವೃದ್ಧಿ ಚಟುವಟಿಕೆಗಳು, ಜನಪರ ಯೋಜನೆಗಳು ಪೂಜ್ಯರನ್ನು “ಆಧುನಿಕ ಮಡಂತ್ಯಾರಿನ ನಿರ್ಮಾತೃ” ಎಂದು ಪರಿಗಣಿಸಲು ಸಹಾಯಕವಾಗಿವೆ.


1982ರ ವರೆಗೆ ಸಹಾಯಕ ಧರ್ಮಗುರುಗಳಾಗಿ ಫಾ| ಚಾಲ್ರ್ಸ್ ನೊರೊನ್ಹಾರರು ನಿರ್ಮಾಣ ಕೆಲಸಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ನಂತರ ಫಾ| ಫೆಲಿಕ್ಸ್ ನೊರೊನ್ಹಾ, ಫಾ| ಬೇಸಿಲ್ ವಾಸ್, ಫಾ| ರೊನಾಲ್ಡ್ ಕುಟಿನ್ಹಾ, ಫಾ| ರಿಚರ್ಡ್ ಕುವೆಲ್ಲೊ, ಫಾ| ಪಾಸ್ಕಲ್ ಮಿನೆಜಸ್ ಮತ್ತು ಫಾ| ಸ್ಟ್ಯಾನಿ ರೊಡ್ರಿಗಸ್‍ರವರ ಸೇವೆ ಸ್ಮರಣೀಯ. ಪ್ರಾಂಶುಪಾಲರಾಗಿ ಫಾ| ಲೋರೆನ್ಸ್ ರೊಡ್ರಿಗಸ್, ಫಾ| ಪೀಟರ್ ಸೋಜಾ, ಫಾ| ಫ್ರಾನ್ಸಿಸ್ ಸೆರಾವೊ, ಫಾ| ರೋಬರ್ಟ್ ಕ್ರಾಸ್ತಾ ಇವರು ಅವಿರತ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ.


1983ರಿಂದ 1985ರ ತನಕ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಫಾ| ವಿಲ್ಸನ್ ಎಲ್. ಡಿ’ಸೋಜಾರವರ ಸೇವೆಯನ್ನು ನೆನೆಯುವುದು ಸಂದರ್ಭೋಚಿತವಾಗಿದೆ. ರೆ| ಡಾ| ಪಿರೇರಾರವರು ಗಾರ್ಡಿಯನ್ ಏಂಜಲ್ಸ್ ಪ್ರೈಮರಿ ಶಾಲೆಯ ವಿಸ್ತಾರಣಾ ಕಾರ್ಯ ನಡೆಸಿದರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕಾರ್ಯಗಳ ಯೋಜನೆಗಳಿಗೆ ಸುಮಾರು 50 ಲಕ್ಷಕ್ಕಿಂತಲೂ ಹೆಚ್ಚು ಧನಸಹಾಯವನ್ನು ಸಂಗ್ರಹಿಸಿದ ಪೂಜ್ಯರು ದೇಶ ವಿದೇಶಹಳಲ್ಲೂ ಜನಪ್ರಿಯ. ಧರ್ಮಕೇಂದ್ರದ ಜನರು ಅಪಾರ ಸೇವೆಯನ್ನು ಪೂಜ್ಯರ ಅವಧಿಯಲ್ಲಿ ನೀಡಿರುತ್ತಾರೆ. ಈ ಅವಧಿಯಲ್ಲಿ ಧರ್ಮಕೇಂದ್ರÀ್ರದಲ್ಲಿ 2 ಧಾರ್ಮಿಕ ಕುಟುಂಬಗಳು ತಮ್ಮ ಸೇವೆಯನ್ನು ಧರ್ಮಕೇಂದ್ರಕ್ಕೆ ನೀಡಲು ಮುಂದಾದರು. 1985 ರಲ್ಲಿ ಡಾನ್ ಬೊಸ್ಕೊ ಸಲೇಶಿಯನ್ ಸಿಸ್ಟರ್ಸ್ ಹಾಗೂ 1986 ರಲ್ಲಿ ಕಾರ್ಮೆಲೈಟ್ಸ್ ಗುರುಗಳು ಮಡಂತ್ಯಾರಿಗೆ ಬಂದರು. ಇಂದಿಗೂ ಧರ್ಮಕೇಂದ್ರÀ್ರದ ಧಾರ್ಮಿಕ ಜೀವನದಲ್ಲಿ ಅರ್ಸುಲೈನ್ ಸಿಸ್ಟರ್ಸ್ ರೊಡಗೂಡಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿವೆ. ಸಿಸ್ಟರ್ಸ್ ಆಫ್ ಡೋನ್ ಬೋಸ್ಕೊ ಮಡಂತ್ಯಾರಿನಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ನಡೆಸಿ ಧರ್ಮಕೇಂದ್ರದ ಪ್ರತೀ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದೆ. ಮಹಾನ್ ಸಾಧಕ, ಹಲವಾರು ಆಬಿವೃದ್ಧಿ ಚಟುವಟಿಕೆಗಳ ಸರದಾರ, ತಮ್ಮ ಸುದೀರ್ಘ 9 ವರ್ಷಗಳ ನಿಸ್ವಾರ್ಥ ಸೇವೆಯ ಜನಾನುರಾಗಿಯಾಗಿದ್ದ ಆಧುನಿಕ ಮಡಂತ್ಯಾರಿನ ನಿಮಾತೃರೆನಿಸಿಕೊಂಡ ಪೂಜ್ಯ ಡಾ| ಫ್ರೆಡ್ ವಿ. ಪಿರೇರಾರವರು 1992 ರಲ್ಲಿ ಉರ್ವಾ ಧರ್ಮಕೇಂದ್ರÀ್ರಕ್ಕೆ ವರ್ಗಾವಣೆಗೊಂಡರು.

ಶಿಸ್ತಿನ ಸಿಪಾಯಿ : ಪಾ| ಅಲೆಕ್ಸಾಂಡರ್ ಲೋಬೊ:
1992ರ ಮೇ 22ರಂದು ಮಡಂತ್ಯಾರಿನ ಧರ್ಮಕೇಂದ್ರದ ಧರ್ಮಗುರುಗಳಾಗಿ ಇವರ ಆಗಮನವಾಯಿತು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದ ಫಾ| ಲೋಬೊ ಶಿಸ್ತಿನ ಸಿಪಾಯಿ. ಆಧ್ಯಾತ್ಮಿಕ ಪುನಶ್ಚೇತನಕ್ಕೆ ಪ್ರಾಧನ್ಯತೆ ನೀಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಜೂನಿಯರ್ ಕಾಲೇಜಿನ ಮೇಲಿನ ಅಂತಸ್ತನ್ನು ಪೂರ್ಣಗೊಳಿಸಿ ಸಭಾಂಗಣವನ್ನು ನಿರ್ಮಿಸಿದರು. ಆರ್ಥಿಕ ಅಡಚಣೆಗಳ ನಡುವೆ ಕೆಲವೊಂದು ಯೋಜನೆಗಳನ್ನು ಯಶಸ್ವಿಯಾಗಿಸಿದರು. ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿಗೆ ಸುಸಜ್ಜಿತ ವಾಚನಾಲಯದ ವ್ಯವಸ್ಥೆ, ಧರ್ಮಕೇಂದ್ರದ ಬಡಜನರಿಗೆ ಆರ್ಥಿಕ ನೆರವು, ಅಶಕ್ತ ಬಡಜನರಿಗೆ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಸಫಲರಾದರು. ಮದ್ಯಪಾನ ವಿರೋಧಿ ನಿಲುವು ಮತ್ತು ಅವರ ಪುನಶ್ಚೇತನಕ್ಕಾಗಿ ಅವರ ಸೇವೆ ಉಲ್ಲೇಖನೀಯ. ಇಡೀ ಚರ್ಚಿನ ಮೇಲ್ಛಾವಣಿಗಳನ್ನು ನವೀಕರಿಸಿದರು. ಕಡಿಮೆ ಅವಧಿಯಲ್ಲಿ ಹಲವು ಯೋಜನೆಗಳನ್ನು ಯಶಸ್ವಿಯಾಗಿಸಿ ಪೂಜ್ಯರು ವರ್ಗಾವಣೆಗೊಂಡರು.


ಪಾ| ಚಾಲ್ಸ್ ್ ನೊರೊನ್ಹಾ:
ಪಾ| ಅಲೆಕ್ಸಾಂಡರ್ ಲೋಬೋರವರ ವರ್ಗಾವಣೆಯ ನಂತರ ಪಾ| ಸಿರಿಲ್ ಡಿಸೋಜರವರು ತಾತ್ಕಾಲಿಕ ಧರ್ಮಗುರುಗಳಾಗಿ ಆಗಮಿಸಿದರು. 1994 ಜುಲೈ 4 ರಂದು ಪಾ| ಚಾಲ್ರ್ಸ್ ನೊರೊನ್ಹಾ ಧರ್ಮಕೇಂದ್ರದ ಧರ್ಮಗುರುಗಳಾÀಗಿ ಅಧಿಕಾರವನ್ನು ಸ್ವೀಕರಿಸಿದರು. 1982 ರಿಂದ 1985ರವರೆಗೆ ಸಹಾಯಕ ಗುರುಗಳಾಗಿ ಪೂರ್ವ ಅನುಭವವನ್ನು ಹೊಂದಿದ್ದ ಪೂಜ್ಯರು ತಮ್ಮ ಏಳು ವರ್ಷಗಳ ಅವಧಿಯಲ್ಲಿ ಇದೇ ಧರ್ಮಕೇಂದ್ರದಲ್ಲಿ ಹಲವಾರು ಜನಪರ ಯೋಜನೆಗಳನ್ನು ಯಶಸ್ವಿಯಾಗಿಸಿದರು. ಧರ್ಮಕೇಂದ್ರದ ಸಾಲದ ಭಾರವನ್ನು ಹೊತ್ತ ಪೂಜ್ಯರು ವಿದ್ಯಾ ಸಂಸ್ಥೆಗಳಿಗಾಗಿ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತಾರೆ. ಪದವಿ ಪೂರ್ವ ಮಹಾವಿದ್ಯಾಲಯದ ಕಟ್ಟಡದ ವಿಸ್ತರಣಾ ಕಾರ್ಯ, ಆಟದ ಮೈದಾನದ ವಿಸ್ತರಣೆ, ಪದವಿ ಕಾಲೇಜಿನ ಪ್ರಗತಿಯಲ್ಲಿದ್ದ ಕೆಲಸ ಕಾರ್ಯ, ಧರ್ಮಕೇಂದ್ರದ ರಸ್ತೆಗೆ ಡಾಮರು, ಪೇಟೆಯಲ್ಲಿ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ, ಧರ್ಮಕೇಂದ್ರದ ಸಂಪನ್ಮೂಲಕ್ಕೆ ಸಹಕಾರಿಯಾಗಿ ಅಡಿಕೆ ತೋಟದ ನಿರ್ಮಾಣ, ಧರ್ಮಕೇಂದ್ರದ ಸುತ್ತಲೂ ಕಂಪೌಂಡು ನಿರ್ಮಾಣ ಇತ್ಯಾದಿ ಅನೇಕ ಯೋಜನೆಗಳ ರೂವಾರಿ.


ಧರ್ಮಗುರುಗಳ ನವೀನ ವಸತಿಗೃಹವನ್ನು ಇವರು ನಿರ್ಮಿಸಿದರು. ಹಳೆ ವಸತಿಗೃಹವನ್ನು ಮಿನಿಹಾಲ್ ಆಗಿ ಪರಿವರ್ತಿಸಿದ್ದು ಇವತ್ತು ಅನೇಕ ಕಾರ್ಯಕ್ರಮಗಳಿಗೆ ಉಪಯೋಗಿಸಲ್ಪಡುತ್ತಿದೆ. ಧರ್ಮಪ್ರಜೆಗಳ ಸಹಕಾರದಿಂದಲೇ ಈ ಗೃಹವನ್ನು ನಿರ್ಮಾಣ ಮಾಡಿದ ಕೀರ್ತಿ ಫಾ| ಚಾಲ್ರ್ಸ್ ನೊರೊನ್ಹಾರವರಿಗೆ ಸಲ್ಲುತ್ತದೆ.


ಮಡಂತ್ಯಾರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ, ಆಂಗ್ಲ ಮಾಧ್ಯಮ ಶಾಲೆಯ ಕೊರತೆ ಕಾಡುತ್ತಿತ್ತು. ಅಪಾರ ದೂರದೃಷ್ಟಿಯ ಫಾ| ಚಾಲ್ರ್ಸ್‍ರವರು ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿ ಆಧುನಿಕ ಶಿಕ್ಷಣಕ್ಕೆ ಕಾಯಕಲ್ಪವನ್ನು ಒದಗಿಸಿದರು.


ಏಳು ವರ್ಷಗಳ ಅವಧಿಯಲ್ಲಿ ಹಲವು ಯೋಜನೆಗಳನ್ನು ಪರಿಪೂರ್ಣಗೊಳಿಸಿ ವಿದ್ಯಾಸಂಸÉ್ಥಗಳ ಸಾಲದ ಭಾರವನ್ನು ಮುಕ್ತಗೊಳಿಸಿದ ಇವರ ಸಾಧನೆ ಪ್ರಶಂಸನೀಯ. ಈ ಅವಧಿಯಲ್ಲಿ ಫಾ| ಸ್ಟÉೀನಿ ರೊಡ್ರಿಗಸ್, ಫಾ| ವಲೇರಿಯನ್ ಮಿನೇಜಸ್, ಫಾ| ಪ್ರಕಾಶ್ ಕುಟಿನ್ಹಾ, ಫಾ| ವಾಲ್ಟರ್ ಮೆಂಡೊನ್ಸಾ (Sಗಿಆ) ಸಹಾಯಕ ಧರ್ಮಗುರುಗಳಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.
ಈ ಅವಧಿಯಲ್ಲಿ ಪ್ರಾಂಶುಪಾಲರಾಗಿ ಪಾ| ಪ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವಲ್ಲಿ ಹಲವು ವಿಧಗಳಲ್ಲಿ ಶ್ರಮಿಸಿರುತ್ತಾರೆ ಜನಾನುರಾಗಿ ಫಾ| ಚಾಲ್ರ್ಸ್ 2001 ಜೂನ್ 2 ರಂದು ಕಿರೆಂ ಚರ್ಚ್‍ಗೆ ವರ್ಗಾವಣೆಗೊಂಡರು.


ಫಾ| ಹೆರಾಲ್ಡ್ ಮಸ್ಕರೇನ್ಹಸ್:
ಕ್ರಿ.ಶ. 2001, ಜೂನ್ 2 ರಂದು ಫಾ| ಹೆರಾಲ್ಡ್ ಮಸ್ಕರೇನ್ಹಸ್‍ರವರು ಧರ್ಮಗುರುಗಳಾಗಿ ಅಧಿಕಾರವನ್ನು ವಹಿಸಿಕೊಂಡರು.


ಆಧ್ಯಾತ್ಮಿಕ, ಶೈಕ್ಷಣಿP,À ಆರ್ಥಿಕ ಕ್ಷೇತ್ರಗಳಲ್ಲಿ ಇವರು ಸೇವೆಯನ್ನು ಸಲ್ಲಿಸಿರುತ್ತಾರೆ. ಹಲವಾರು ಅಭಿವೃದ್ಧಿ ಕಾರ್ಯಗಳು ಇವರ ಸೇವಾ ಅವಧಿಯಲ್ಲಿ ಧರ್ಮಕೇಂದ್ರದಲ್ಲಿ ನಡೆದಿವೆ. ಸಮುದಾಯ ತರಭೇತಿ ಶಿಬಿರಗಳ ಸಂಘಟನೆ, ಆಧ್ಯಾತ್ಮಿಕ ತರಭೇತಿ, ನಾಳ ಹಾಗೂ ಗರ್ಡಾಡಿ ಕೇಂದ್ರಗಳ ನವೀಕರಣ ಇವರ ಅವಧಿಯಲ್ಲಿ ನಡೆಯಿತು.


ವಿದ್ಯಾಸಂಸ್ಥೆಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಕಾನ್ಪರೆನ್ಸ್ ಕೊಠಡಿ ನಿರ್ಮಾಣ, ಪಿಠೋಪಕರಣ, ವಾಹನ ಪಾರ್ಕಿಂಗ್ ವ್ಯವಸ್ಥೆ ಒದಗಿಸಿ ಕಾಲೇಜಿಗೆ ಬಿ++ ಗ್ರೇಡ್ ಲಭಿಸಲು ಕಾರಣಕರ್ತರಾಗಿದ್ದಾರೆ.


ವಿದ್ಯಾರ್ಥಿನಿಲಯದ ನವೀಕರಣ, ಆಂಗ್ಲ ಮಾಧ್ಯಮ ಶಾಲೆಗೆ ಸರಕಾರದ ಮಾನ್ಯತೆ ದೊರಕಿಸಿಕೊಡುವಲ್ಲಿ ಶ್ರಮಿಸಿರುತ್ತಾರೆ. ಮಡಂತ್ಯಾರು ಧರ್ಮಕೇಂದ್ರÀ್ರದ ತ್ರೈಮಾಸಿಕ ಮ್ಯಾಗಜಿನ್ “ಕಾಳ್ಜಾಚೆಂ ಜಯ್ತ್” ಇವರ ಅವಧಿಯಲ್ಲಿ ಪ್ರಾರಂಭವಾಯಿತು.


ಈ ಅವಧಿಯಲ್ಲಿ ಸಹಾಯಕ ಧರ್ಮಗುರುಗಳಾಗಿ ಫಾ| ಪ್ರಾನ್ಸಿಸ್ ರೊಡ್ರಿಗಸ್, ಫಾ| ಎಡ್ವಿನ್ ಡಿ,ಸೋಜ ಮತ್ತು ಫಾ| ರೋಮಿಯೋ ಲುವಿಸ್ ಸಹಕಾರವನ್ನು ನೀಡಿರುತ್ತಾರೆ. 2005ರ ಮೇ 14ರಂದು ಮಂಜೇಶ್ವರ ಚರ್ಚ್‍ಗೆ ವರ್ಗಾವಣೆಗೊಂಡರು.


ಶಾಂತಿದೂತ : ಫಾ| ವಲೇರಿಯನ್ ಫ್ರ್ಯಾಂಕ್ :
ಮಂಗಳೂರು ಧರ್ಮಕ್ಷೇತ್ರದ ಜ್ಯೂಡಿಷಿಯಲ್ ವಿಕಾರ್ ಆಗಿರುವ ಫಾ| ವಲೇರಿಯನ್ ಫ್ರ್ಯಾಂಕ್‍ರವರು, ಮಡಂತ್ಯಾರು ಧರ್ಮಕೇಂದ್ರದ ಧರ್ಮಗುರುಗಳಾಗಿ 2005 ಮೇ 14ರಂದು ಅಧಿಕಾರ ಸ್ವೀಕರಿಸಿದರು. ಧರ್ಮಕೇಂದ್ರದ ಜನರ ಸಹಕಾರದೊಂದಿಗೆ ಸಮುದಾಯವನ್ನು ತರಭೇತಿ ಶಿಬಿರಗಳ ಮೂಲಕ ಬಲಪಡಿಸಿದರು. ಧರ್ಮಪ್ರಜೆಗಳ ಹಿತೈಷಿಗಳ ಸಹಾಯ ಸಹಕಾರದೊಂದಿಗೆ ಸುಮಾರು 80 ಲಕ್ಷ ರೂ ವೆಚ್ಚದ ಆಂಗ್ಲ ಮಾಧ್ಯಮ ಶಾಲೆಯ ಹೊಸ ಕಟ್ಟಡವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಗರ್ಡಾಡಿಯ ಸೈಂಟ್ ಆ್ಯಂಟನಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ 3 ತರಗತಿಗಳ ಸೇರ್ಪಡೆ, ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಹೊಸ 2 ತರಗತಿಗಳ ನಿರ್ಮಾಣ, ಸೇಕ್ರೆಡ್ ಹಾರ್ಟ್ ಜ್ಯೂನಿಯರ್ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿ ವ್ಯವಸ್ಥೆ, 2007ರಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿಗೆ “ಬಿಸಿಎ” ಹೊಸ ಕೋರ್ಸಿನ ಪ್ರಾರಂ¨,sÀ ಸತತ ನಾಲ್ಕು ವರ್ಷಗಳ ಕಾಲ ಆಂಗ್ಲ ಮಾಧ್ಯಮ ಶಾಲೆಯ SSಐಅ ಫಲಿತಾಂಶ 100% ಪಡೆದಿರುವುದು ಉಲ್ಲೇಖನೀಯ. ಇವರ ಅವಧಿಯಲ್ಲಿ 2009ರಲ್ಲಿ ಗಾರ್ಡಿಯನ್ ಏಂಜಲ್ಸ್ ಶಾಲೆಯು ತಾಲೂಕಿನಲ್ಲೇ ಉತ್ತಮ ಶಾಲೆ ಪ್ರಶಸ್ತಿಯನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡ ಫಾ| ಫ್ರ್ಯಾಂಕ್‍ರವರು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಸೇವೆಯನ್ನು ಸಲ್ಲಿಸಿರುತ್ತಾರೆ. ಧರ್ಮಗುರುಗಳು 2010 ಮೇ 29ರಂದು ಆಮ್ಮೆಂಬಳ ಚರ್ಚ್‍ಗೆ ವರ್ಗಾವಣೆಗೊಂಡರು.


ಅಭಿವೃದ್ಧಿಯ ಹರಿಕಾರ - ರೆ| ಫಾ| ಲೊರೆನ್ಸ್ ಮಸ್ಕರೇನ್ಹಸ್
ಕ್ರಿ. ಶ. 2010, ಮೇ 31ರಂದು ಧರ್ಮಕೇಂದ್ರದ ಧರ್ಮಗುರುಗಳಾಗಿ ಫಾ| ಲೊರೆನ್ಸ್ ಮಸ್ಕರೇನ್ಹಸ್‍ರವರು ಅಧಿಕಾರ ವಹಿಸಿಕೊಂಡರು. ಮೇರು ವ್ಯಕ್ತಿತ್ವದ, ಪ್ರಾಮಾಣಿಕ, ನಿಸ್ವಾರ್ಥ ಮನೋಭಾವನೆಯ, ಹೃದಯ ವೈಶಾಲ್ಯತೆಯ ಅವಿಶ್ರಾಂತ ಚೇತನ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳ ಕ್ಷಿಪ್ರಕ್ರಾಂತಿಗೈದು ಧರ್ಮಕೇಂದ್ರÀ್ರದ ಚಿತ್ರಣವನ್ನು ಬದಲಾಯಿಸಿದ ಅಭಿವೃದ್ಧಿಯ ಹರಿಕಾರ.
ಸಮರ್ಥ ಆಡಳಿತಾಧಿಕಾರಿಯಾಗಿ ಇವರ ಪ್ರಗತಿಪರ ಯೋಜನೆಯ ಏಳು ವರ್ಷಗಳು ಸಪ್ತ ವರ್ಣಗಳಾಗಿ ಸೇಕ್ರಡ್ ಹಾರ್ಟ್ ಧರ್ಮಕೇಂದ್ರದ ಸುವರ್ಣ ಯುಗ (ಉoಟಜeಟಿ ಂge) ಎನಿಸಿವೆ.


ಸಹಾಯಕ ಧರ್ಮಗುರುಗಳಾಗಿ ಫಾ| ರೋಹಿತ್ ಡಿ’ಕೊಸ್ತಾ, ಫಾ| ರೊನಾಲ್ಡ್ ಪಿಂಟೊ, ಫಾ| ಕ್ಲಿಫರ್ಡ್ ಪಿಂಟೊ, ಫಾ| ಪ್ರವೀಣ್ ಡಿ’ಸೋಜಾ, ಪ್ರಾಂಶುಪಾಲರಾಗಿ ಫಾ| ಜೆರೊಮ್ ಡಿ’ಸೋಜಾ ಸ್ಮರಣೀಯ ಸೇವೆಯನ್ನು ಸಲ್ಲಿಸಿರುತ್ತಾರೆ.


ಇವರ ಅವಧಿಯಲ್ಲಿ ಚರ್ಚ್ ಕ್ಯಾಂಪಸ್ ಆಧುನಿಕ ಮೆರುಗನ್ನು ಪಡೆಯಿತು. ಸ್ನಾತಕೋತ್ತರ ವಿಭಾಗದ ಸ್ಥಾಪನೆ (ಒ’ಛಿom), ಇಂಟರ್‍ಲಾಕ್ ವ್ಯವಸ್ಥೆ, ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್‍ಗಳ ಹೊಸ ಕಟ್ಟಡ ರಚನೆ, ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್, ಸೇಕ್ರೆಡ್ ಹಾರ್ಟ್ ಕಾಲೇಜ್ ಕ್ಯಾಂಟೀನ್ ವ್ಯವಸ್ಥೆ, ಪದವಿಪೂರ್ವ ವಿಭಾಗಕ್ಕೆ ಫಾ| ಫ್ರೆಡ್ ವಿ. ಪಿರೇರಾ ಸ್ಮರಣಾರ್ಥ ವಿಜ್ಞಾನ ವಿಭಾಗದ ಸಂಯೋಜನೆ, ಸುಸಜ್ಜಿತ ಲ್ಯಾಬ್ ವ್ಯವಸ್ಥೆ, ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋಒಪರೇಟಿವ್ ಸೊಸೈಟಿಯ ಸ್ಥಾಪನೆ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ವ್ಯಕ್ತಿತ್ವ ರೂಪಿಸಲು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ಯು.ಜಿ.ಸಿ. ಪ್ರಾಯೋಜಿತ ಸೇಕ್ರೆಡ್ ಹಾರ್ಟ್ ಇಂಡೋರ್ ಸ್ಟೇಡಿಯಂ ಕಾಮಗಾರಿ ಆರಂಭ, ಯು.ಜಿ.ಸಿ. ಪ್ರಾಯೋಜಿತಾ 400 ಮೀ ಟ್ರ್ಯಾಕ್ ಗ್ರೌಂಡ್ ನಿರ್ಮಾಣ, ಧರ್ಮಪ್ರಜೆಗಳ ತನುಮನ-ಧನಗಳ ಸಂಪೂರ್ಣ ಸಹಕಾರದೊಂದಿಗೆ ಮತ್ತು ಊರ ಪರವೂರ ದಾನಿ, ಹಿತೈಷಿ ಅಭಿಮಾನಿಗಳ ಸಹಾಯ ಹಸ್ತದೊಂದಿಗೆ ಧರ್ಮಕೇಂದ್ರದ ಜನರ ಬಹುದೀರ್ಘಕಾಲದ ಕನಸಿನ ಯೋಜನೆ, ಜಿಲ್ಲೆಯಲ್ಲಿಯೇ ವಿನೂತನ ಶೈಲಿಯ ಸಮುದಾಯ ಭವನದ ನಿರ್ಮಾಣ ಮತ್ತು ಲೋಕಾರ್ಪಣೆಗೆ ಕಾರಣರಾದರು. ‘Uಉಅ ಓಂಂಅ’ ಸಮಿತಿಯಿಂದ ಹಾಗೂ ಪದವಿ ಕಾಲೇಜಿಗೆ 2 ಬಾರಿ ‘ಂ’ gಡಿಚಿಜe ಮಾನ್ಯತೆ ಇವರ ಅವಧಿಯಲ್ಲಿ ಲಭಿಸಿರುವುದು ಉಲ್ಲೇಖನೀಯ. ಪದವಿ ಪೂರ್ವ ವಿಭಾಗಕ್ಕೂ P.U. ಇಲಾಖೆಯಿಂದ ‘ಂ’ ಮಾನ್ಯತೆ ಲಭಿಸಿದೆ.


ಜೂನ್ 4, 2017 ರಂದು ಅಮ್ಮೆಂಬಳ ಚರ್ಚಿಗೆ ಧರ್ಮಗುರುಗಳಾಗಿ ಇವರ ವರ್ಗಾವಣೆಯಾಯಿತು.


ಪ್ರಸ್ತುತ ಮುಖ್ಯ ಧರ್ಮಗುರುಗಳಾಗಿ ವಂದನೀಯ ಫಾ| ಬೇಸಿಲ್ ವಾಸ್, ಸಹಾಯಕ ಧರ್ಮಗುರುಗಳಾಗಿ ವಂದನೀಯ ಫಾ| ಆಲ್ವಿನ್ ಡಿ’ಸೋಜ, ಪಿ. ಯು. ಕಾಲೇಜಿಗೆ ಪ್ರಾಂಶುಪಾಲರಾಗಿ ವಂದನೀಯ ಫಾ| ಜೆರೋಮ್ ಡಿ’ಸೋಜರವರು ತಮ್ಮ ಅವಿರತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 1987 – 1988 ರಲ್ಲಿ ಫಾ ಬೇಸಿಲ್ ವಾಸ್‍ರವರು ಸಹಾಯಕ ಧರ್ಮಗುರುಗಳಾಗಿದ್ದಾಗ ಆಗ ಸಂಚಾಲಕರ ವೀದೆಶ ಪ್ರಯಾಣದ ಸಮಯ ಪ್ರಭಾರ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಸೆಕ್ರೇಡ್ ಹಾರ್ಟ್ ಕಾಲೇಜಿಗೆ ಅನುದಾನ ಪಡೆಯಲು ನೀಡಿದ ಸೇವೆ ಸ್ಮರಣೀಯ. ಫಾ| ಬೇಸಿಲ್ ವಾಸ್‍ರವರ ಮುಂದಾಳುತ್ವದಲ್ಲಿ, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದ ಸವಿನೆನಪಿಗೆ ಯೇಸುವಿನ ತಿರು ಹೃದಯದ ಪವಾಡ ಮೂರ್ತಿಯನ್ನು ದೇವಾಲಯದ ಪೂರ್ವಭಾಗದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನಕೇಂದ್ರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಊರ ಪರವೂರ ಭಕ್ತಾಭಿಮಾನಿಗಳ ಕೇಂದ್ರ ಬಿಂಧುವೆನಿಸಿದ ಮಡಂತ್ಯಾರು ದಾರ್ಶನಿಕರನ್ನು ತನ್ನತ್ತ ಸೆಳೆಯುತ್ತಿದೆ. ಬಡವರಿಗೆ ಮನೆಗಳ ಕೊಡುಗೆಯನ್ನಿತ್ತ ಫಾ| ಬೇಸಿಲ್ ವಾಸ್‍ರವರು, ಮಡಂತ್ಯಾರು ಧರ್ಮಕೇಂದ್ರವನ್ನು ಪುಣ್ಯಕ್ಷೇತ್ರವನ್ನಾಗಿ ಮಾರ್ಪಡಿಸುವ ಕನಸು ಸಾಕಾರಗೊಳ್ಳಲಿದೆ. ಚರ್ಚ್ ಸನಿಹ ಆಧುನಿಕ ಶೈಲಿಯ ಸುಂದರ ಧ್ಯಾನದ 200 ಮೀ ಉದ್ದದ ಗುಹೆ ರಚಿಸಲಾಗಿದ್ದು ಭಕ್ತಾದಿಗಳಿಗೆ ಮೌನ ಪ್ರಾರ್ಥನೆಗೆ ಅವಕಾಶವನ್ನು ಕಲ್ಪಿಸುತ್ತದೆ. ಆಧ್ಯಾತ್ಮಿಕ ಸೇವೆಗೆ ಹೆಚ್ಚಿನ ಮಹತ್ವವನ್ನು ನೀಡಿ ಧರ್ಮಪ್ರಜೆಗಳ ಏಕತೆ ಮತ್ತು ಸಹೋದರತೆಗೆ ಶ್ರಮಿಸುತ್ತಿದ್ದಾರೆ. ಹಸಿರು ಕ್ರಾಂತಿ, ನೀರಿಂಗಿಸುವಿಕೆ ಇತ್ಯಾದಿಗಳಿಗೆ ಒತ್ತು ನೀಡಿ ತರ ತರಹದ ಮರಗಿಡಗಳನ್ನು ನೆಡಲಾಗಿದೆ. ಮಕ್ಕಳಿಗೆ ಬಾಲವನ ನಿರ್ಮಾಣವಾಗಿದೆ.


ಪ್ರಸ್ತುತ ಶ್ರೀ ರೊನಾಲ್ಡ್ ಸಿಕ್ವೇರಾ ಉಪಾಧ್ಯಕ್ಷರಾಗಿ ಶ್ರೀ ಲಿಯೋ ರೊಡ್ರಿಗಸ್ ಕಾರ್ಯದರ್ಶಿಯಾಗಿ, ಧರ್ಮಗುರುಗಳೊಂದಿಗೆ ಚರ್ಚ್ ಪಾಲನಾ ಮಂಡಳಿ ಮತ್ತು ಧರ್ಮ ಪ್ರಜೆಗಳ ಸಹಕಾರದೊಂದಿಗೆ ಇಡೀ ಸಮುದಾಯವು ಏಕತೆಯಿಂದ ಕ್ರಿಯಾತ್ಮಕವಾಗಿ ಸಧೃಡಗೊಳ್ಳುತ್ತಿದೆ.


ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆ (2017- 2018)
“ಯೇಸುವಿನ ತಿರು ಹ್ರದಯದ” ಪ್ರೇರಕ ಶಕ್ತಿಯಿಂದ ಕಳೆದ ನೂರ ಇಪ್ಪತೈದು ವರ್ಷಗಳಿಂದ ಸುಂದರವಾಗಿ ನಡೆದು ಬಂದ ಮಡಂತ್ಯಾರು ಧರ್ಮಕೇಂದ್ರ ತನ್ನ ಅಸ್ಥಿತ್ವದ ಶತಮಾನೋತ್ತರ ಬೆಳ್ಳಿ ಹಬ್ಬವನ್ನು 2018ರ ಮೇ 2 ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು. ನೂರಾರು ಧರ್ಮಗುರುಗಳ ಹಾಗೂ ಸಾವಿರಾರು ಭಕ್ತಾಭಿಮಾನಿಗಳ ಸಮ್ಮುಕದಲ್ಲಿ ನಡೆದ ಈ ಸಂಭ್ರಮ ಮಡಂತ್ಯಾರಿನ ಇತಿಹಾಸದಲ್ಲಿ ಅವಿಸ್ಮರಿಣೀಯವಾಗಿದೆ.